Current Date 25 Aug, 2026

ರಶ್ಮಿಕಾ ಮಂದಣ್ಣ ಕೊಡವ ಮಾತುಗಳನ್ನು ಕೇಳಿ ಪರಭಾಷಾ ಫ್ಯಾನ್ಸ್ ಕನ್ಫ್ಯೂಸ್

ಟಾಲಿವುಡ್‌, ಬಾಲಿವುಡ್, ಕಾಲಿವುಡ್ ಅಂತ ಅತ್ತಿಂದ ಇತ್ತ ಇತ್ತಿಂದ ಅತ್ತ ಫ್ಲೈಟ್ ಏರಿ ಸುತ್ತಾಡುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹುಟ್ಟೂರಿಗೆ ಬಂದಿದ್ದರು. ತನ್ನ ಸ್ನೇಹಿತೆ ಯಾತ್ರಾ ದೇಚಮ್ಮಳ ವಿವಾಹ ಮಹೋತ್ಸವದಲ್ಲಿ ಭಾಗಿ ಆಗಿದ್ದರು. ಈ ವೇಳೆ ಕೊಡವ ಭಾಷೆಯಲ್ಲಿ ಮಾತನಾಡಿರುವ ವೀಡಿಯೋ ಹಂಚಿಕೊಂಡಿದ್ದಾರೆ.

"ಎಲ್ಲರಿಕ್ಕೂ ನಲ್ಲಮೆ (ಎಲ್ಲರಿಗೂ ನಲ್ಮೆಯ ನಮಸ್ಕಾರ), ನಾನು ಕೊಡಗಿನಲ್ಲಿದ್ದೇನೆ. ಗೆಳತಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಡಗಿಗೆ ಬಂದಿದ್ದೇನೆ. ಇಲ್ಲಿಯವರೆಗೆ ನನಗೆ ನಿಮ್ಮ ಆಶೀರ್ವಾದ ದೊರಕಿದೆ. ಮುಂದೆಯೂ ನಿಮ್ಮ ಆಶೀರ್ವಾದ ದೊರಕಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಇಕ್ಕಂಜಸ... ಇಲ್ಲಿಯವರೆಗೆ ನನಗೆ ಕಾವೇರಮ್ಮ, ಇಗ್ಗುತ್ತಪ್ಪ ಸ್ವಾಮಿಯ ಆಶೀರ್ವಾದ ದೊರಕಿದೆ. ನೀವೆಲ್ಲರೂ ನನಗೆ ಯಾವಾಗಲೂ ಬೆಂಬಲ ನೀಡುತ್ತ ಇದ್ದೀರಿ. ಮುಂದೆಯೂ ಇದೇ ರೀತಿ ಬೆಂಬಲ ನೀಡುತ್ತಿರಿ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.